KING JAMES BIBLEಹುಡುಕಿ

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ

ಕೀರ್ತನೆಗಳು 110

ಎಲ್ಲಾ · ಕೀರ್ತನೆಗಳುಹುಡುಕಿ

1ಯೆಹೋವ ದೇವರು ನನ್ನ ಕರ್ತ ಆಗಿರುವವರಿಗೆ ಹೇಳಿದ್ದೇನೆಂದರೆ: “ನಾನು ನಿನ್ನ ವಿರೋಧಿಗಳನ್ನು ನಿನ್ನ ಪಾದಗಳ ಪೀಠವಾಗಿ ಮಾಡುವವರೆಗೂ ನನ್ನ ಬಲಗಡೆಯಲ್ಲಿ ಕುಳಿತುಕೊಂಡಿರಿ.”

2ನಿಮ್ಮ ಬಲವಾದ ರಾಜದಂಡವನ್ನು ಯೆಹೋವ ದೇವರು ಚೀಯೋನಿನ ಹೊರಗೂ ವಿಸ್ತರಿಸುವರು. “ನಿಮ್ಮ ಶತ್ರುಗಳ ಮಧ್ಯದಲ್ಲಿ ದೊರೆತನ ಮಾಡಿರಿ,” ಎಂದು ಅವರು ನಿಮಗೆ ಹೇಳುವರು.

3ನೀವು ನಿಮ್ಮ ಸೈನ್ಯವನ್ನು ಒಟ್ಟುಗೂಡಿಸುವ ದಿನದಲ್ಲಿ ನಿಮ್ಮ ಪ್ರಜೆಗಳು ಸಂತೋಷದಿಂದ ತಾವಾಗಿಯೇ ಸೇರಿಕೊಳ್ಳುವರು. ಮುಂಜಾನೆಯ ಉದರದಿಂದ ಬರುವ ಇಬ್ಬನಿಯಂತೆ ನಿಮ್ಮ ಯೋಧರು ನಿಮ್ಮ ಕಡೆ ಇಳಿದು ಬರುವರು.

4“ನೀವು ಸದಾಕಾಲವೂ ಮೆಲ್ಕಿಜೆದೇಕನ ಕ್ರಮದ ಯಾಜಕರಾಗಿದ್ದೀರಿ,” ಎಂದು ಯೆಹೋವ ದೇವರು ಆಣೆಯಿಟ್ಟು ಹೇಳಿದ್ದಾರೆ. ಅವರು ತಮ್ಮ ಮನಸ್ಸನ್ನು ಬದಲಾಯಿಸರು.

5ಯೆಹೋವ ದೇವರು ನಿಮ್ಮ ಬಲಗಡೆಯಲ್ಲಿದ್ದಾರೆ; ಅವರು ತಮ್ಮ ತೀರ್ಪಿನ ದಿನದಲ್ಲಿ ಅರಸರನ್ನು ದಂಡಿಸುವರು.

6ದೇವರು ಜನಾಂಗಗಳನ್ನು ನ್ಯಾಯತೀರಿಸುವಾಗ, ವಿಸ್ತಾರವಾದ ರಣರಂಗದಲ್ಲಿ ಶತ್ರುಗಳನ್ನು ದಂಡಿಸಿ ಅವರಿಗೆ ಮರಣದಂಡನೆ ವಿಧಿಸುವರು.

7ಕರ್ತ ಆಗಿರುವವರು ದಾರಿಯುದ್ದಕ್ಕೂ ಹಳ್ಳದಿಂದ ನೀರು ಕುಡಿಯುತ್ತಾ, ಜಯದ ಮಾರ್ಗದಲ್ಲಿ ತಲೆಯೆತ್ತಿ ನಡೆದುಹೋಗುವರು.

Sources and attribution