KING JAMES BIBLEಹುಡುಕಿ

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ

ಕೀರ್ತನೆಗಳು 136

ಎಲ್ಲಾ · ಕೀರ್ತನೆಗಳುಹುಡುಕಿ

1ಯೆಹೋವ ದೇವರಿಗೆ ಉಪಕಾರ ಸಲ್ಲಿಸಿರಿ; ಅವರು ಒಳ್ಳೆಯವರು; ದೇವರ ಪ್ರೀತಿಯು ಎಂದೆಂದಿಗೂ ಇರುವುದು.

2ದೇವಾಧಿ ದೇವರಿಗೆ ಕೃತಜ್ಞತಾಸ್ತುತಿ ಸಲ್ಲಿಸಿರಿ; ದೇವರ ಪ್ರೀತಿಯು ಎಂದೆಂದಿಗೂ ಇರುವುದು.

3ಪ್ರಭುಗಳ ಪ್ರಭುವಿಗೆ ಕೃತಜ್ಞತಾಸ್ತುತಿ ಸಲ್ಲಿಸಿರಿ; ದೇವರ ಪ್ರೀತಿಯು ಎಂದೆಂದಿಗೂ ಇರುವುದು.

4ಅವರೊಬ್ಬರೇ ಮಹಾ ಅದ್ಭುತಗಳನ್ನು ಮಾಡುತ್ತಾರೆ; ದೇವರ ಪ್ರೀತಿಯು ಎಂದೆಂದಿಗೂ ಇರುವುದು.

5ತಮ್ಮ ಜ್ಞಾನದಿಂದ ಪರಲೋಕಗಳನ್ನು ನಿರ್ಮಿಸಿದರು; ದೇವರ ಪ್ರೀತಿಯು ಎಂದೆಂದಿಗೂ ಇರುವುದು.

6ನೀರಿನ ಮೇಲೆ ಭೂಮಿಯನ್ನು ವಿಸ್ತರಿಸಿದರು; ದೇವರ ಪ್ರೀತಿಯು ಎಂದೆಂದಿಗೂ ಇರುವುದು.

7ದೊಡ್ಡ ಬೆಳಕುಗಳನ್ನು ನಿರ್ಮಿಸಿದರು; ದೇವರ ಪ್ರೀತಿಯು ಎಂದೆಂದಿಗೂ ಇರುವುದು.

8ಸೂರ್ಯನು ಹಗಲನ್ನಾಳುವಂತೆ ಮಾಡಿದರು; ದೇವರ ಪ್ರೀತಿಯು ಎಂದೆಂದಿಗೂ ಇರುವುದು.

9ರಾತ್ರಿಯನ್ನಾಳಲು ಚಂದ್ರನನ್ನೂ, ನಕ್ಷತ್ರಗಳನ್ನೂ ಇಟ್ಟರು; ದೇವರ ಪ್ರೀತಿಯು ಎಂದೆಂದಿಗೂ ಇರುವುದು.

10ಈಜಿಪ್ಟಿನವರ ಚೊಚ್ಚಲ ಮಕ್ಕಳನ್ನು ದಂಡಿಸಿದರು; ದೇವರ ಪ್ರೀತಿಯು ಎಂದೆಂದಿಗೂ ಇರುವುದು.

11ಇಸ್ರಾಯೇಲರನ್ನು ಈಜಪ್ಟಿನಿಂದ ಹೊರಗೆ ಬರಮಾಡಿದವರನ್ನು ಕೊಂಡಾಡಿರಿ; ದೇವರ ಪ್ರೀತಿಯು ಎಂದೆಂದಿಗೂ ಇರುವುದು.

12ಬಲವಾದ ಕೈಯಿಂದಲೂ, ಚಾಚಿದ ತೋಳಿನಿಂದಲೂ ಅವರನ್ನು ಹೊರತಂದರು; ದೇವರ ಪ್ರೀತಿಯು ಎಂದೆಂದಿಗೂ ಇರುವುದು.

13ಕೆಂಪು ಸಮುದ್ರವನ್ನು ವಿಭಾಗಿಸಿದರು; ದೇವರ ಪ್ರೀತಿಯು ಎಂದೆಂದಿಗೂ ಇರುವುದು.

14ಇಸ್ರಾಯೇಲನ್ನು ಅದರ ನಡುವೆ ದಾಟಿಸಿದರು; ದೇವರ ಪ್ರೀತಿಯು ಎಂದೆಂದಿಗೂ ಇರುವುದು.

15ಫರೋಹನನ್ನೂ, ಅವನ ಸೈನ್ಯವನ್ನೂ ಕೆಂಪು ಸಮುದ್ರದಲ್ಲಿ ಕೆಡವಿದರು; ದೇವರ ಪ್ರೀತಿಯು ಎಂದೆಂದಿಗೂ ಇರುವುದು.

16ತಮ್ಮ ಜನರನ್ನು ಮರುಭೂಮಿಯಲ್ಲಿ ನಡೆಸಿದರು; ದೇವರ ಪ್ರೀತಿಯು ಎಂದೆಂದಿಗೂ ಇರುವುದು.

17ದೊಡ್ಡ ಅರಸರನ್ನು ದಂಡಿಸಿದರು; ದೇವರ ಪ್ರೀತಿಯು ಎಂದೆಂದಿಗೂ ಇರುವುದು.

18ಶ್ರೇಷ್ಠ ಅರಸರನ್ನು ಸಹ ದಂಡಿಸಿದರು; ದೇವರ ಪ್ರೀತಿಯು ಎಂದೆಂದಿಗೂ ಇರುವುದು.

19ಅಮೋರಿಯರ ಅರಸನಾದ ಸೀಹೋನನು ದಂಡನೆಹೊಂದಿದನು; ದೇವರ ಪ್ರೀತಿಯು ಎಂದೆಂದಿಗೂ ಇರುವುದು.

20ಬಾಷಾನಿನ ಅರಸನಾದ ಓಗನು ಸಂಹಾರವಾದ ಮತ್ತೊಬ್ಬನು; ದೇವರ ಪ್ರೀತಿಯು ಎಂದೆಂದಿಗೂ ಇರುವುದು.

21ಅವರ ದೇಶವನ್ನು ಬಾಧ್ಯತೆಯಾಗಿ ದೇವರು ಕೊಟ್ಟರು; ದೇವರ ಪ್ರೀತಿಯು ಎಂದೆಂದಿಗೂ ಇರುವುದು.

22ತಮ್ಮ ಸೇವಕ ಇಸ್ರಾಯೇಲನಿಗೆ ಅದು ಸೊತ್ತಾಯಿತು; ದೇವರ ಪ್ರೀತಿಯು ಎಂದೆಂದಿಗೂ ಇರುವುದು.

23ನಾವು ಹೀನ ಸ್ಥಿತಿಯಲ್ಲಿದ್ದಾಗ ನಮ್ಮನ್ನು ನೆನಪಿಸಿಕೊಂಡರು; ದೇವರ ಪ್ರೀತಿಯು ಎಂದೆಂದಿಗೂ ಇರುವುದು.

24ನಮ್ಮ ವೈರಿಗಳಿಂದ ನಮ್ಮನ್ನು ಬಿಡಿಸಿದರು; ದೇವರ ಪ್ರೀತಿಯು ಎಂದೆಂದಿಗೂ ಇರುವುದು.

25ಸಕಲ ಜೀವಿಗಳಿಗೂ ಆಹಾರವನ್ನು ಕೊಡುತ್ತಾರೆ; ದೇವರ ಪ್ರೀತಿಯು ಎಂದೆಂದಿಗೂ ಇರುವುದು.

26ಪರಲೋಕದ ದೇವರನ್ನು ಕೊಂಡಾಡಿರಿ; ದೇವರ ಪ್ರೀತಿಯು ಎಂದೆಂದಿಗೂ ಇರುವುದು.

Sources and attribution