KING JAMES BIBLEಹುಡುಕಿ

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ

ಕೀರ್ತನೆಗಳು 54

ಎಲ್ಲಾ · ಕೀರ್ತನೆಗಳುಹುಡುಕಿ

1ದೇವರೇ, ನಿಮ್ಮ ಹೆಸರಿನಿಂದ ನನ್ನನ್ನು ರಕ್ಷಿಸಿರಿ. ನಿಮ್ಮ ಬಲದಿಂದ ನನಗೆ ನ್ಯಾಯತೀರಿಸಿರಿ.

2ದೇವರೇ, ನನ್ನ ಪ್ರಾರ್ಥನೆಯನ್ನು ಕೇಳಿರಿ. ನನ್ನ ಬಾಯಿಯ ಮಾತಿಗೆ ಕಿವಿಕೊಡಿರಿ.

3ಗರ್ವಿಗಳು ನನಗೆ ವಿರೋಧವಾಗಿ ಎದ್ದಿದ್ದಾರೆ. ಕ್ರೂರಿಗಳು ನನ್ನ ಪ್ರಾಣವನ್ನು ತೆಗೆಯಬೇಕೆಂದಿದ್ದಾರೆ. ಅವರು ದೇವರನ್ನು ಲಕ್ಷಿಸುವದೇ ಇಲ್ಲ.

4ನಿಜವಾಗಿಯೂ ದೇವರು ನನ್ನ ಸಹಾಯಕರು. ಯೆಹೋವ ದೇವರು ನನ್ನ ಪ್ರಾಣವನ್ನು ಕಾಪಾಡುವವರು.

5ನನ್ನ ಕೆಡುಕನ್ನು ಬಯಸುವವರು ಕೇಡನ್ನು ಅನುಭವಿಸಲಿ. ನಿಮ್ಮ ನಂಬಿಗಸ್ತಿಕೆಯಿಂದ ನೀವು ಅವರನ್ನು ದಂಡಿಸಿರಿ.

6ನಾನು ನಿಮಗೆ ಸ್ವಂತ ಇಚ್ಛೆಯಿಂದ ಬಲಿಯನ್ನು ಅರ್ಪಿಸುವೆನು. ಯೆಹೋವ ದೇವರೇ, ನಿಮ್ಮ ಒಳ್ಳೆಯ ಹೆಸರನ್ನು ಕೊಂಡಾಡುವೆನು.

7ಏಕೆಂದರೆ ಎಲ್ಲಾ ಇಕ್ಕಟ್ಟಿನಿಂದ ನನ್ನನ್ನು ಬಿಡಿಸಿದ ದೇವರು ನೀವೇ. ನನ್ನ ವೈರಿಗಳ ಮೇಲೆ ಜಯ ಸಾಧಿಸಿದ್ದನ್ನು ನಾನು ನೋಡುವೆನು.

Sources and attribution