KING JAMES BIBLEಹುಡುಕಿ

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ

ಕೀರ್ತನೆಗಳು 112

ಎಲ್ಲಾ · ಕೀರ್ತನೆಗಳುಹುಡುಕಿ

1ಯೆಹೋವ ದೇವರನ್ನು ಸ್ತುತಿಸಿರಿ. ಯೆಹೋವ ದೇವರಿಗೆ ಭಯಪಟ್ಟು ಅವರ ಆಜ್ಞೆಗಳಲ್ಲಿ ಬಹಳವಾಗಿ ಸಂತೋಷಿಸುವವರು ಧನ್ಯರು.

2ಅವರ ಸಂತತಿಯು ಭೂಮಿಯಲ್ಲಿ ಪರಾಕ್ರಮಶಾಲಿಯಾಗಿರುವುದು; ಯಥಾರ್ಥರ ಸಂತತಿಯು ಆಶೀರ್ವಾದ ಹೊಂದುವುದು.

3ಧನವೂ, ಐಶ್ವರ್ಯವೂ ಅವರ ಮನೆಯಲ್ಲಿ ಇರುವುದು; ಅವರ ನೀತಿಯು ಶಾಶ್ವತವಾಗಿ ಉಳಿಯುವುದು.

4ಯಥಾರ್ಥರಿಗೆ ಕತ್ತಲಲ್ಲಿ ಬೆಳಕು ಮೂಡುವುದು; ಅವರು ಕೃಪೆಯೂ, ಅನುಕಂಪವೂ, ನೀತಿಯೂ ಉಳ್ಳವವರಾಗಿರುವರು.

5ದಯೆತೋರಿಸಿ ಸಾಲಕೊಡುವವರಿಗೆ, ಒಳ್ಳೆಯದಾಗುವುದು; ಅವರು ತಮ್ಮ ಕಾರ್ಯಗಳನ್ನು ನ್ಯಾಯದಿಂದ ನಡೆಸುವರು.

6ನಿಶ್ಚಯವಾಗಿ ನೀತಿವಂತರು ಎಂದೆಂದಿಗೂ ಕದಲರು; ನೀತಿವಂತರು ನಿತ್ಯವಾಗಿ ಜ್ಞಾಪಕದಲ್ಲಿ ಇರುವರು.

7ಅವರಿಗೆ ಅಶುಭದ ಸುದ್ದಿಯ ಭಯ ಇರುವುದಿಲ್ಲ; ಅವರ ಹೃದಯವು ಯೆಹೋವ ದೇವರಲ್ಲಿ ಭರವಸವಿಟ್ಟು ಸ್ಥಿರವಾಗಿರುವುದು.

8ಅವರ ಹೃದಯವು ಸುರಕ್ಷಿತವಾಗಿರುವುದು. ಅವರು ತಮ್ಮ ವೈರಿಗಳಿಗಾಗುವ ಶಿಕ್ಷೆಯನ್ನು ನೋಡುವರು, ಭಯಪಡರು.

9ಅವರು ಬಡವರಿಗೆ ದಾನಗಳನ್ನು ಧಾರಾಳವಾಗಿ ಹಂಚಿಡುವರು; ಅವರ ನೀತಿಯು ಸದಾಕಾಲವೂ ನೆಲೆಯಾಗಿ ಇರುವುದು; ಅವನ ಬಲವು ಘನದಿಂದ ಉನ್ನತವಾಗುವುದು.

10ದುಷ್ಟರು ಇದನ್ನು ಕಂಡು ವ್ಯಥೆ ಪಡುವರು; ಅವರು ತಮ್ಮ ಹಲ್ಲು ಕಡಿದು ಮರೆಯಾಗಿ ಹೋಗುವರು; ದುಷ್ಟರ ಆಶೆಯು ನಾಶವಾಗುವುದು.

Sources and attribution