KING JAMES BIBLEಹುಡುಕಿ

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ

ಕೀರ್ತನೆಗಳು 113

ಎಲ್ಲಾ · ಕೀರ್ತನೆಗಳುಹುಡುಕಿ

1ಯೆಹೋವ ದೇವರನ್ನು ಸ್ತುತಿಸಿರಿ. ಯೆಹೋವ ದೇವರ ಸೇವಕರೇ, ಯೆಹೋವ ದೇವರ ಹೆಸರನ್ನು ಸ್ತುತಿಸಿರಿ.

2ಇಂದಿನಿಂದ ಯುಗಯುಗಕ್ಕೂ ಯೆಹೋವ ದೇವರ ಹೆಸರಿಗೆ ಸ್ತುತಿಯುಂಟಾಗಲಿ.

3ಸೂರ್ಯೋದಯದಿಂದ ಅದರ ಅಸ್ತಮಾನದವರೆಗೂ ಯೆಹೋವ ದೇವರ ಹೆಸರು ಸ್ತುತಿಹೊಂದತಕ್ಕದ್ದು.

4ಯೆಹೋವ ದೇವರು ಎಲ್ಲಾ ಜನಾಂಗಗಳ ಮೇಲೆ ಉನ್ನತವಾದವರು; ಅವರ ಮಹಿಮೆಯು ಆಕಾಶಗಳ ಮೇಲೆ ಮೆರೆಯುತ್ತದೆ.

5ನಮ್ಮ ದೇವರಾದ ಯೆಹೋವ ದೇವರ ಹಾಗೆ ಯಾರು ಇದ್ದಾರೆ? ಉನ್ನತಲೋಕದಲ್ಲಿ ಅವರು ವಾಸಿಸುತ್ತಾರೆ.

6ಆಕಾಶವನ್ನೂ, ಭೂಮಿಯನ್ನೂ ತಗ್ಗಿಸಿಕೊಂಡು ನೋಡುತ್ತಾರೆ.

7ಧೂಳಿನೊಳಗಿಂದ ದರಿದ್ರರನ್ನು ಎಬ್ಬಿಸುತ್ತಾರೆ, ತಿಪ್ಪೆಯೊಳಗಿಂದ ಬಡವರನ್ನು ಎತ್ತುತ್ತಾರೆ.

8ದೇವರು ಅವರನ್ನು ಅಧಿಪತಿಗಳ ಸಂಗಡ ಇರುವಂತೆ ಮಾಡುತ್ತಾರೆ. ತಮ್ಮ ಜನರ ಅಧಿಪತಿಗಳ ಸಂಗಡ ಕೂರಿಸುತ್ತಾರೆ.

9ಬಂಜೆಯಾದವಳನ್ನು ಮಕ್ಕಳ ಸೌಭಾಗ್ಯದಲ್ಲಿ ಸಂತೋಷಿಸಿ, ಮನೆಯಲ್ಲಿ ನಿವಾಸಿಸುವಂತೆ ಮಾಡುತ್ತಾರೆ. ಯೆಹೋವ ದೇವರನ್ನು ಸ್ತುತಿಸಿರಿ.

Sources and attribution