KING JAMES BIBLEಹುಡುಕಿ

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ

ಕೀರ್ತನೆಗಳು 114

ಎಲ್ಲಾ · ಕೀರ್ತನೆಗಳುಹುಡುಕಿ

1ಇಸ್ರಾಯೇಲರು ಈಜಿಪ್ಟಿನೊಳಗಿಂದಲೂ, ಯಾಕೋಬನ ಮನೆತನವು ಅನ್ಯಭಾಷೆಯುಳ್ಳ ಜನರೊಳಗಿಂದಲೂ ಹೊರಟುಬಂದಾಗ,

2ಯೆಹೂದವು ದೇವರ ಪರಿಶುದ್ಧ ಸ್ಥಳವಾಯಿತು, ಇಸ್ರಾಯೇಲು ದೇವರ ರಾಜ್ಯವಾಯಿತು.

3ಸಮುದ್ರವು ನೋಡಿ ಓಡಿಹೋಯಿತು; ಯೊರ್ದನ್ ನದಿ ಹಿಂದಿರುಗಿತು.

4ಬೆಟ್ಟಗಳು ಟಗರುಗಳಂತೆ ಓಡಿತು, ಗುಡ್ಡಗಳು ಕುರಿಮರಿಗಳಂತೆಯೂ ಓಡಾಡಿದವು.

5ಸಮುದ್ರವೇ, ನಿನಗೆ ಏನಾಯಿತು? ಏಕೆ ಓಡಿ ಹೋಗುತ್ತೀ? ಯೊರ್ದನ್ ನದಿಯೇ, ಏಕೆ ಹಿಂದಿರುಗುತ್ತೀ?

6ಬೆಟ್ಟಗಳೇ, ಟಗರುಗಳ ಹಾಗೆಯೂ; ಚಿಕ್ಕಗುಡ್ಡಗಳೇ, ನೀವು ಕುರಿಮರಿಗಳ ಹಾಗೆಯೂ ಹಾರಾಡುವುದೇಕೆ?

7ಯೆಹೋವ ದೇವರ ಸನ್ನಿಧಿಯಲ್ಲಿಯೂ, ಯಾಕೋಬಿನ ದೇವರ ಮುಂದೆಯೂ ಭೂಮಿಯೇ ನಡುಗು.

8ದೇವರು ಬಂಡೆಯನ್ನು ನೀರಿನ ಕೆರೆಯಾಗಿಯೂ, ಕಗ್ಗಲ್ಲನ್ನು ನೀರಿನ ಬುಗ್ಗೆಯಾಗಿ ಮಾರ್ಪಡಿಸುತ್ತಾರೆ.

Sources and attribution